ಸದಾ ಪುಸ್ತಕಗಳನ್ನು ಬೇಟೆಯಾಡುವ ನರೇಂದ್ರ ಪೈ ಈಗ ಕಥಾ ಸಂಕಲನದೊಂದಿಗೆ ಓದುಗರ ಮುಂದೆ ನಿಂತಿದ್ದಾರೆ. ‘ಟಕ್ ಟಿಕ್ ಪೆನ್ನು’ ಎಂಬ ಭಿನ್ನ ಹೆಸರಿನ ಈ ಕಥಾ ಸಂಕಲನ ಅಪಾರ ಅವರ ಕೈ ಚಳಕದಲ್ಲಿ ಅಷ್ಟೇ ಭಿನ್ನ ರೂಪವನ್ನೂ ಪಡೆದಿದೆ.
ನರೇಂದ್ರ ಪೈ ಮಾತಾಡಿದ್ದು ಕಡಿಮೆ. ಆದರೆ ಪುಸ್ತಕ ಪ್ರೀತಿ ಹರಡಲು ದುಡಿದದ್ದು ಅಪಾರ. ಕೆ ಎಂ ಸಿ ಯಲ್ಲಿ ಕೆಲಸ ಮಾಡುವ ನರೇಂದ್ರ ಪೈ ಅವರು ಹೆಚ್ಚಾಗಿ ಕಾಣಸಿಗುವುದು ಅತ್ರೀ ಮಳಿಗೆಯಲ್ಲಿ. ಇವರದು ಸದ್ದಿಲ್ಲದ ಸೇವೆ. ಒಳ್ಳೆ ಪತ್ರಿಕೆ ಎನಿಸಿದರೆ ತಾವೇ ಮುಂದಾಗಿ ಹತ್ತಾರು ಪ್ರತಿ ಖರೀದಿಸಿ ಚಂದಾ ಮಾಡಿಸಿ ಕಳಿಸುತ್ತಾರೆ. ಪರಿಚಯ ಇದ್ದರೂ, ಇಲ್ಲದಿದ್ದರೂ ಇವರ ಕೆಲಸ ನಿಲ್ಲುವುದಿಲ್ಲ. ಅಂತಹ ನರೇಂದ್ರರ ಕೃತಿಯ ಬಗ್ಗೆ ಕಥೆಗಾರ ಕೆ ಸತ್ಯನಾರಾಯಣರ ಮುನ್ನುಡಿಯ ಒಂದು ಪುಟ್ಟ ನೋಟ ಇಲ್ಲದೆ. ಕೃತಿ ಇಷ್ಟವಾದಲ್ಲಿ, ಇಲ್ಲಾ ನರೇಂದ್ರರನ್ನ ಸಂಪರ್ಕಿಸಬೇಕಾದಲ್ಲಿ: narendra.pai@manipal.edu
* * *
ಬರವಣಿಗೆಯ ಬಗ್ಗೆ ನರೇಂದ್ರರ ಕಾಳಜಿ ಹವ್ಯಾಸಿ ರೀತಿಯದ್ದಲ್ಲ. ಅಸ್ಥೆ ಗಂಭೀರವಾದದ್ದೇ, ಪ್ರಯೋಗಶೀಲವಾದದ್ದೇ. ಆದರೆ ತಾನು ಎಷ್ಟು ಬರೆದರೂ ಅದಕ್ಕಿಂತ ವಿಶಾಲವಾದ ಬದುಕು ತನ್ನೆದುರಿಗಿದೆ ಎಂಬ ವಿನಯ ಮತ್ತು ಅಸಹಾಯಕತೆ ಕೂಡಾ ಅವರ ಕಥೆಗಳಲ್ಲಿ ಕಾಣುತ್ತದೆ.
ಕೊನೆಗೂ ಮನುಷ್ಯರನ್ನಾಗಿಯೋ, ಕಥೆಗಾರರನ್ನಾಗಿಸಿಯೋ ನಮ್ಮನ್ನು ಬೆಳೆಸುವುದು ಇಂತಹ ವಿನಯ ಮತ್ತು ಅಸಹಾಯಕತೆಯೇ ಅಲ್ಲವೇ? ಇದರ ಜೊತೆಗೆ ನರೇಂದ್ರರ ಕಥೆಗಳಲ್ಲಿ ಇಡಿಕಿರಿದಿರುವ ಅನುಭವಗಳು, ವ್ಯಕ್ತಿಗಳು, ಘಟನಾವಳಿಗಳು ಕೂಡ ನರೆಂದ್ರರಿಂದ ಬಿಡುಗಡೆಯನ್ನು, ನಿರಾಳವನ್ನು ಬಯಸುತ್ತವೆ. ಹಾಗಾಗಿ ಬರವಣಿಗೆಯ ಬಗ್ಗೆ ಎಷ್ಟೇ ನಿರ್ಲಿಪ್ತಿಯಿಂದಿದ್ದರೂ ಅವರ ಒಳಪ್ರಪಂಚದ ಒತ್ತಡವೇ ನರೆಂದ್ರರನ್ನು ನಮಗೆ ಕಥೆಗಾರರಾಗಿ ಮತ್ತೆ ಮತ್ತೆ ಭೇಟಿ ಮಾಡಿಸುತ್ತಲೇ ಇರುತ್ತದೆ..
ಕಥೆಗಾರ ವಿವೇಕ ಶಾನಭಾಗರೊಂದಿಗೆ ನರೇಂದ್ರ ಪೈ
ಚಿತ್ರ: ಸಂಪದ







0 Comments